Friday, October 17, 2008

ಕಾರ್, ಕಾರ್, ಕಾರ್, ಕಾರ್, ಎಲ್ನೋಡಿ ಕಾರ್

ಅಮೇರಿಕಾ ಅಮೇರಿಕಾ ಫಿಲ್ಮ್ನಲ್ಲಿ ನಮ್ಮ ಜಯಶ್ರೀದೇವಿಯವರು ಕಾರ್, ಕಾರ್, ಕಾರ್, ಕಾರ್, ಎಲ್ನೋಡಿ ಕಾರ್ ಅಂತ ಎಷ್ಟು ಚೆನ್ನಾಗಿ ಹಾಡಿದಾರೆ. ಅವ್ರು ಹೀಗೆ ಹಾಡ್ಬೇಕಿದ್ರೆ ಅವ್ರಿಗೆ ಮುಂದೆ ಒಂದು ದಿನ ಬೆಂಗಳೂರಿನಲ್ಲೂ ಇದೆ ರೀತಿ ಎಲ್ನೋಡಿದ್ರು ಕಾರು, ಸ್ಕೂಟರು, ಬೈಕು ತುಂಬತ್ತೆ ಅಂತ ಅನ್ನಿಸಿತ್ತೋ ಏನೋ...! ಅದಿಕ್ಕೆ ಆ ಹಾಡನ್ನ ಅವ್ರು ಅಷ್ಟು ಚೆನ್ನಾಗಿ ಎಲ್ಲಾರಿಗೂ ಅರ್ಥ ಆಗ್ಲಿ ಅಂಥ ಹಾಡಿದರು ಅನ್ಸತ್ತೆ. ಆದ್ರೆ ನಂ ಜನ ಅದರಿಂದ ಏನು ಕಲೀಲಿಲ್ಲ....
ಮೊನ್ನೆ ಒಂದು ದಿನ ಬೈಕಲ್ಲಿ ಆಪೀಸ್ಗೆ ಬಂದಿದ್ದೆ. ಆಹಾ... ಅದೆಷ್ಟು ಚೆನ್ನಾಗಿತ್ತು ಟ್ರಾಫಿಕ್ಕು ಅಂತೀರಾ..!! ಒಂದೊಂದೇ ಇಂಚು ನಿದಾನಕ್ಕೆ ಹೋಗ್ತಾ.... ಹೋಗ್ತಾ..... ಎಲ್ಲ ಹೊಗೆ ಕುಡೀತ...ಆಫೀಸ್ ಪಕ್ಕದಲ್ಲಿರೋ ಗಾಡಿ ನೋಡ್ಕೊಂಡು ....ಹಣೆ ಮೇಲೆ ಬರ್ತಿದ್ದ ಬೆವರನ್ನ ಒರಿಸ್ಕೋತ, ವಾಹನ ಏನ್ ಮಜಾ ಅಂತೀರಾ..! ಮನೆಗೆ ಹೋದ ತಕ್ಷಣ ನನ್ ಹೆಂಡತಿ " ಕರಿಯ I ಲವ್ ಯು, ಬೆಂಗಳೂರು ಟ್ರಾಫಿಕ್ ಮೇಲಾಣೆ" ಅಂಥ ಹಾಡೋದೊಂದು ಬಾಕಿ..!!

2 comments:

urbhat [Raj] said...

Ravianna...
Kariya I love you annodu arthavayitu Bangalore yaava level ge bandide antha... nimma chintane chennagide... anda haaage aa kaar kaar haadu.... "nanna preeethiya hudugi" du.. america america alla...haadidavaru jayashreedevi ya annodoo anumaaana nanage..

Anonymous said...

Ravikiran america america chitradhalla.
"nanna preethiya hudugi" chitradhu.