Wednesday, May 28, 2008

ಹಿಂಗಿದೆ ಗುರು ಬೆಂಗಳೂರು..!

ಸ್ವಲ್ಪ ದಿನಗಳ ಹಿಂದೆ ನನ್ ಸ್ನೇಹಿತ ರಾಜಣ್ಣ ಮೈಲ್ ಮಾಡಿ ಕೇಳಿದ್ರು..... ಹೆಂಗಿದೆ ರವಿಯಣ್ಣ ಬೆಂಗಳೂರು ಅಂತ.... ಅವರಿಗೆ ರಿಪ್ಲೈ ಮಾಡಿದನ್ನೇ ಇಲ್ಲಿ ಬರ್ದಿದೀನಿ... ಅಷ್ಟೆ..
ಬೆಂಗಳೂರು ಕೆಟೋಗಿದೆ... ಕೆಟ್ಟು ಕುಲಗೆಟೋಗಿದೆ. ಆಕಾಶಕ್ಕೆರಿರೋ ಮನೆ ಬಾಡಿಗೆ...ಬಾಡಿಗೆ ಹತ್ತರಸ್ಟು ಅದ್ವಾನ್ಸು...ಕೊಡಕ್ಕೆ ರೆಡಿ ಇದ್ರು ಮನೆ ಸಿಗೋಲ್ಲ... ಸಿಕ್ರು ಮನೆ ಸರಿ ಇರಲ್ಲ...ಮನೆ ಸರಿ ಇದ್ರೆ ಓನರ್ ಕಿರಿಕ್ಕು..ಮನೇಲಿ..... ನೀರಿಲ್ಲ ನೀರು ಬಂದ್ರೆ ಕರೆಂಟ್ ಇಲ್ಲ....
ಬೀದಿಗೆ ಬಂದ್ರೆ ರೋಡ್ ತುಂಬ ಜನ ಗುರು.... ಕಾಲ್ ಕಾಲ್ಗೆ ಸಿಕ್ಕೊಂದು ಸಾಯ್ತಾರೆ..! ಫೂತ್ಪಾಥ್ ತುಂಬ ಜನ... ರೋಡ್ ತುಂಬ ಟ್ರಾಫಿಕ್ಕು...ಎಲ್ ನೋಡಿದ್ರು ಕಾರು... ಟೂ ವ್ಹೀಲೆರ್. ಉಸಿರಾದಕ್ಕೆ ಒಳ್ಳೆ ಗಾಳಿ ಇಲ್ಲ... ಬರಿ ಹೊಗೆ....
ಇಷ್ಟರ ಮದ್ಯ ಬಿ.ತಿ. ಎಸ್ ಮತ್ತೆ ಆಟೋ ಕಿರಿಕ್ಕು. ಎಲ್ಲಿಗೆ ಹೋಗ್ಬೇಕಿದ್ರು ಆಟೋ ಸಿಗೋಲ್ಲ... ಸಿಕ್ರೆ ಅವ್ನು ಬರಲ್ಲ... ಬಂದ್ರೆ ಒನ್ & ಹಾಪು. ಅಸ್ತು ಕೊಟ್ತ್ಮೆಲೂಅವ್ನ ಜೊತೆ ಕಿರಿಕ್ಕ್ ತಪ್ಪಿದ್ದಲ್ಲ...
ಅಷ್ಟು ಜನ ಇದ್ರು ಒಬ್ರು ಕನ್ನಡ ಮಾತೊದೊವ್ರು ಸಿಗೋಲ್ಲ..... ಸಿಕ್ಕವ್ರಿಗೆ ಸರಿಯಾಗಿ ಮಾತಾಡಕ್ಕೆ ಬರಲ್ಲ....ಸರಿಯಾಗಿ ಕನ್ನಡ ಬರೋವ್ರು ಕನ್ನಡ ಮಾತೆ ಆದೊಲ್ಲ....
ಹಾಳಾಗೋಗಿದೆ ಗುರುವೇ.... ಬೆಂಗಳೂರು ಹಾಳಾಗೋಗಿದೆ...!

No comments: