Friday, April 4, 2008

ಹುಚ್ಚು ಮನಸ್ಸುಗಳ ತೊಳಲಾಟ..

ಕೆಲವು ಸಲ ಯೋಚನೆ ಬರತ್ತೆ.... ಯಾಕೆ ಮನಸ್ಸು ಹೀಗೆ ಅಂತ. ನಾನು 6 ವರ್ಷದ ಹಿಂದೆ ಹೈದರಾಬಾದಿಗೆ ಬಂದಾಗ ಯಾಕೆ ಇಲ್ಲಿಗೆ ಬಂದೆ, ಇನ್ನೆಸ್ಟು ದಿನ ಇಲ್ಲಿರ್ತೀನಿ ಅಂತ ಅನ್ನಿಸ್ತಾ ಇತ್ತು. ನಾನು ಇಲ್ಲಿಗೆ ಬಂದ್ 2 ವಾರಕ್ಕೆ ಅಪ್ಪಂಗೆ ಹಾರ್ಟ್ ಅಟ್ಯಾಕ್ ಆಗಿದ್ದು ನನ್ನನ್ನ ಇನ್ನು ಯೋಚನೆ ಮಾಡೋ ಹಾಗೆ ಮಾಡಿತ್ತು. ಆದ್ರೆ... ಈಗ.... ಇಲ್ಲಿಗೆ ಬಂದು 6 ವರ್ಷಗಳ ನಂತರ ಈಗ ಅನ್ನಿಸ್ತಾ ಇದೆ.... ನಾನು ಇಷ್ಟು ಬೇಗ ಹೈದರಾಬಾದ್ ಬಿಟ್ಟು ಬೆಂಗ್ಳೂರಿಗೆ ವಾಪಾಸ್ ಹೋಗ್ತಿನಿ ಅಂತ ಅಂದ್ಕೊಂದಿರ್ಲಿಲ್ಲ. ಹೈದರಾಬಾದ್ನಲ್ಲಿ ಎಲ್ಲ ಚೆನ್ನಾಗಿತ್ತು ಅಂಥ ಅಲ್ಲ..... ಆದ್ರೆ ಇಲ್ಲಿ ಜೀವನಕ್ಕೆ ನಾವು ಒಗ್ಗಿ ಹೋಗಿದ್ವಿ ಅನ್ನಿಸತ್ತೆ.

೬ ವರ್ಷದಲ್ಲಿ ಯಾಕಿಸ್ಟು ಬದಲಾವಣೆ...?! ಆಗ ಬೇಡ ಅನ್ನಿಸಿದ್ದು ಈಗ ಯಾಕೆ ಬೇಕಾಗಿದೆ..?! ಹೌದು... ನನ್ನ ಜೀವನದಲ್ಲಿ ಕೂಡ ಸಾಕಷ್ಟು ಬದಲಾವಣೆಗಲಾಗಿದೆ. ಕೆಲಸ, ಅಧಿಕಾರ, ಆಸ್ತಿ, ಮದುವೇ, ಮಗು.... ಎಲ್ಲವೂ ಬದಲಾವಣೆಗೆ ಕಾರಣವಾಗುವ ಅಂಶಗಳೇ.

ಬೆಂಗ್ಳೂರಿಗೆ ಹೋಗಕ್ಕೆ ಬೇಜಾರು ಅಂಥ ಅಲ್ಲ.... ಆದ್ರೆ ಮನಸ್ಸಿಗೆ ಸಮಾಧಾನ ಇಲ್ಲ. ಹೌದು.... ಬೆಂಗ್ಳೂರಿಗೆ ಹೋಗಕ್ಕೆ ನಂಗೆ, ಅದಕಿಂತ ಹೆಚ್ಚಾಗಿ ರಮ್ಯಂಗೆ ಇಷ್ಟ ಇಲ್ಲ. ಇಲ್ಲಿ ಇಷ್ಟ ಪಟ್ಟು ಮಾಡಿದ್ದ ಮನೆ ಇದೆ. ಒಳ್ಳೆ ಕೆಲ್ಸ ಇದೆ. ಆದ್ರೆ ಮಗನ ಆರೋಗ್ಯಕ್ಕೆ ಬೆಂಗಳೂರು ಉತ್ತಮ ಅನ್ನೋ ನಮ್ಮ ನಂಬಿಕೆ, ರಮ್ಯನಿಗೆ ಸ್ವಲ್ಪ ಕಂಪನಿ ಇರತ್ತೆ ಅನ್ನೋ ಒಂದು ಸಮಾದಾನ. ಆದ್ರೆ ಇನ್ನೊಂದು ಕಡೆ ಬೆಂಗಳೂರು ಟ್ರಾಫಿಕ್ಕು, ಆಕಾಶಕ್ಕೆರಿರೋ ಬಾಡಿಗೆ ಎಲ್ಲ ನೆನೆಸ್ಕೊಂದ್ರೆ ಹೆದರಿಕೆ ಆಗತ್ತೆ. ಇವೆಲ್ಲ ಯೋಚನೆ ಮಾಡಿ ಮಾಡಿ ಮಾಡಿ ನಾನು ರಮ್ಯ ಸ್ವಲ್ಪ ದಿನ ತಲೆ ಕೆಡಿಸ್ಕೊಂಡಿದ್ದು ಇದೆ.

ಸ್ಕಂದನಿಗೆ physiotherapy ಮಾಡಿಸಬೇಕು ಅಂತ ಗೊತ್ತಾದ ತಕ್ಷಣ ನಾನು US ನಿಂದ ಹೊರಟೆ. Flight ನಲ್ಲಿ ಬರ್ಬೇಕಿದ್ರೆ ನನ್ ಮನಸ್ಸಿನ ತೊಳಲಾಟ ಶುರು ಆಗಿತ್ತು. ಏನೋ ಹೇಳ್ತಾರಲ್ಲ.... sixth sense ಅಂತ....ಹಾಗೆ ಯಾಕೋ ಅನ್ನಿಸ್ತಾ ಇತ್ತು...ನನ್ ಜೀವನದಲ್ಲಿ ಕೆಲವು change ಆಗತ್ತೆ ಅಂತ. ಸರಿ....... ಸ್ಕಂದನ physiotherapy ಶುರು ಆಗಿ ಅದನ್ನ ಹೈದರಾಬಾದಿನಲ್ಲಿ ಮಾದಿಸೋ ಪ್ರಯತ್ನನು ಮಾಡಿದ್ದಯ್ತು. ಅದು ಸರಿ ಹೋಗದೆ ಬೆಂಗಳೂರಿಗೆ ಮರಳಿ ಹೋಗಿ ಆಯ್ತು. ಬಹುಶ ಆಗಲೇ ನಮ್ಮಿಬ್ಬರಿಗೆ ಅನ್ನಿಸಿತ್ತು.... ಬೆಂಗಳೂರಿಗೆ ಹಿಂತಿರುಗೋದು ineviteble ಅಂತ. ಅದು ಈಗ ಕಾರ್ಯಗತವಾಯ್ತು ಅಷ್ಟೆ.

ಮೊನ್ನೆ ಒಬ್ಬ ಸ್ನೇಹಿತನ ಹತ್ರ ಮಾತಾಡ್ತಾ ಇದ್ದಾಗ ಈ ವಿಷ್ಯ ಬಂತು. ಅವ್ನ ಹಿತ ನುಡಿ "ಈಗ ನಿನ್ ಮಗನ ಆರೋಗ್ಯ ಮುಖ್ಯ ಕಣೋ... ಯೋಚನೆ ಮಾಡ್ದೆ ಹೋಗು" ಅಂತ. ನಂಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ನಾನು ಬೆಂಗಳೂರಿಗೆ ಹೋಗಕ್ಕೆ ಯೋಚನೆ ಮಾಡ್ತಾ ಇಲ್ಲ.... ಆದರೆ ಇಷ್ಟಪಟ್ಟು, ಕಷ್ಟಪಟ್ಟು ಮಾಡಿರೋ ಸ್ವಂತ ಮನೆ ಮಾರಿ ಹೋಗಬೇಕಲ್ಲ ಅನ್ನೋ ಬೇಸರನ ಅವ್ನಿಗೆ explain ಮಾಡೋದು ನಂಗೆ ಕಷ್ಟ ಅನ್ನಿಸ್ತು.

ಕೊನೆಗೆ ನಮ್ಮ ಸಮಾಧಾನಕ್ಕೆ ನಾನು ಹೇಳ್ಕೊಳೋದು.... "ಅಲ್ಲಿರುವುದು ನಮ್ಮನೆ...ಇಲ್ಲಿರುವುದು ಸುಮ್ಮನೆ..!"

2 comments:

urbhat [Raj] said...

Life is like train journey...you will have to get down at your station no matter however like it. enanthira..?

Vishwanath.N said...

I don't know if it hurts...but I have started to believe in Yella Brahme.... Skanda is all that matters and all that exists.